Wednesday, February 16, 2011

ಪ್ರೀತಿ ಹುಟ್ಟಿದ ಸಮಯ....

 'Bathroom' ನನಗೆ ಯಾವಗಲೂ ಒಂದು ವಿಶೇಷ ಸ್ಥಳ. ನನ್ನ ಅನೇಕ ಯೋಚನೆ-ಯೋಜನೆಗಳಿಗೆ ಅದೇ ಉಗಮಸ್ಥಾನ. ಏಕೆ ಅಂತ ಗೊತ್ತಿಲ್ಲ ಬಾತ್ ರೂಮ್ ಅನೇಕ ಜನರಿಗೆ ಒಂದು ಸ್ಪೂರ್ತಿಯ ತಾಣ. ಸ್ಟೇಜ್ ಮೇಲೆ ಎಲ್ಲರ ಮುಂದೆ perform ಮಾಡಲು ಆಗದವರು ಬಾತ್ ರೂಮ್ ಲ್ಲಿ ತಮ್ಮ ಪ್ರದರ್ಶನ ನೀಡಿ ತಮ್ಮ ಬೆನ್ನು ತಾವೇ ಚಪ್ಪರಿಸಿಕೊಳ್ಳಬಹುದು. ಬಾತ್ ರೂಮ್ ಸಿ೦ಗರ್, ಬಾತ್ ರೂಮ್ ಡಾನ್ಸರ್ ಅಂಥಾರಲ್ಲ ಹಾಗೇ ನಾನು ಬಾತ್ ರೂಮ್ ರೈಟರ್ ಇರಬಹುದು. ಏಕಂದ್ರೆ ನನ್ನ ಎಲ್ಲ ಲೇಖನಗಳ ಯೋಚನೆ ಇಲ್ಲಿಂದಲೇ ಆರಂಭವಾಗುತ್ತೆ. ಇವತ್ತು ಆಗಿದ್ದು ಅದೇ.'Valentine's Day' ಬೇರೆ ಹತ್ತಿರ ಬರುತ್ತಿದೆ. ಅದೂ ಅಲ್ಲದೇ ಬಹಳ ದಿನಗಳ ನಂತರ ನಿನ್ನೇ ತಾನೇ ನಮ್ಮ ಹುಡುಗಿಯ facebook profile ನೋಡಿದೆ. ಹಾಗೆ ಒಂದು ಸಾರಿ ಎಲ್ಲ ನೆನಪಾಗಿ ಒಂದು blog ರೆಡಿ ಆಗಿಯೇ ಬಿಡ್ತು. ಅದೇ ಈ ’ ಪ್ರೀತಿ ಹುಟ್ಟಿದ ಸಮಯ’.
   ಎರಡು ಕಾರಣಗಳಿಗಾಗಿ ನಾನು ದೇವರಿಗೆ ಯಾವಗಲೂ ಋಣಿಯಾಗಿದ್ದೆನೆ. Education lifeನ ನಡುವೆ ನಾನು ಪ್ರೀತಿಯಲ್ಲಿ ಬೀಳದ ಹಾಗೆ ನೋಡಿಕೊಂಡಿದ್ದಕ್ಕೆ, ಮತ್ತೆ ನಾನು propose ಮಾಡಿದ ಹುಡುಗಿ ನನ್ನ reject ಮಾಡಿದ್ದಕ್ಕೆ. ಇಲ್ಲ ಅಂದಿದ್ರೆ ನನಗಂತೂ maintain ಮಾಡೋದಿಕ್ಕೆ ಆಗುತ್ತಿರಲ್ಲಿಲ್ಲ. ಈ  project, internship..pocket ಬೇರೆ ಖಾಲಿಯಾಗಿದೆ. ಇದರ ಜೊತೆ ಆ ರಿಸ್ಕ್ ಬೇರೆ. ಬೇಡಪ್ಪ ಬೇಡ... ಈ ಲೈಫೇ ಚೆನ್ನಾಗಿದೆ.
   ಇದೆಲ್ಲ ’ಬುದ್ದಿ’ ಹೇಳುವ ಮಾತು. ಆದರೆ inner consciousness- ಅಂತಪ್ರಜ಼ೆಃ- ಅನ್ನೋದೊಂದು ಇರುತ್ತಲ್ಲ, ಅದು ಹೇಳೋದೆ ಬೇರೆ. "ಮಗನೇ, ನಿನಗೆ ಸಿಗಲ್ಲಿಲ್ಲ ಅಂಥಾ ಹೀಗೆಲ್ಲಾ ಮಾತಾಡ್ತಿದ್ದೀಯಾ. ಅದೇನೋ ’ಹುಳಿ ದ್ರಾಕ್ಷಿ’ ಕತೆ ಇದೆಯಲ್ಲ ಆ ತರಹ. ನಿನ್ನ ಬಗ್ಗೆ ನನಗೆ ಗೊತ್ತಿಲ್ವಾ??".
   ಹ್ಹಾಹ್ಹಾ... ಹೀಗಿದೆ ನೋಡಿ ಜೀವನ ಅಂದ್ರೆ. ಸಿಕ್ಕರೂ ಒಂದು, ಸಿಗದಿದ್ರೂ ಒಂದು. ಗೆದ್ದರೆ ಒಂದು ಚಿಂತೆ, ಸೋತರೆ ಮತ್ತೊಂದು. ಅದೇನೆ ಇರಲಿ ನಮ್ಮ ಮುಖ್ಯ ವಿಷಯಕ್ಕೆ ಬರೋಣ. ನೋಡಿ, ನಿಮಗೆಲ್ಲ ಗೊತ್ತಿರುವ ಹಾಗೆ ನಾನೊಬ್ಬ ಸರಳ,ಸಜ್ಜನ,ಸಾತ್ವಿಕ,ಮೃದು ಸ್ವಭಾವದ,ಮಗುವಿನ ಮನಸ್ಸಿನ,ಪಾಪದ ಹುಡುಗ ಆಗಿದ್ದೆ. ನನ್ನ ಪಾಡಿಗೆ ನಾನು ’ಶಿವಾ’ ಅಂತಾ ಜೀವನ ಸಾಗಿಸುತ್ತಿದ್ದೆ. ಆಗ ನಮ್ಮ ಹುಡುಗಿಯ ಎಂಟ್ರಿ ಆಗುತ್ತೇ. No..no...mine is not 'Love at First Sight' .ಅದೇನ್ರಿ 'Love at First Sight’...bull shit... ಅದೆಂಗೆ ಪೂರ್ತಿ ಪರಿಚಯವಾಗದೆನೇ, ಅರ್ಥ ಮಾಡಿಕೊಳ್ಳದೆನೇ ಲವ್ ಅಂತೆ. ನನ್ನದು ಹಾಗಲ್ಲ.Love after years. ಅದ್ಯಾಕೆ ಲವ್ ಆಯ್ತು ಅಂತಾ ನನ್ನ ಹಿಂದಿನ  blog ’my love-failure story’ಯಲ್ಲಿ ಹೇಳಿದ್ದೇನೆ. ಲವ್ ಹುಟ್ಟಿದ ಮೇಲೆ ಜೀವನ ಒಂದು ಪ್ರೇಮ ಕಾವ್ಯದಂತಾಯ್ತು. ಮಾತು ಕಡಿಮೆಯಾದವು, ಕನಸುಗಳು ಹೆಚ್ಚಾದವು. "ಮಾತಿಲ್ಲ, ಕಥೆಯಿಲ್ಲ ಬರೀ ರೋಮಾಂಚನ" ಅಂಥಾರಲ್ಲ ಹಾಗೇನೆ. ಎಲ್ಲ ಯೋಚನೆಗಳು ಹಾಡಿನ ರೂಪ ಪಡೆದವು. walking speed ಕಡಿಮೆಯಾಯ್ತು, ನಿದ್ದೆ ಕಡಿಮೆಯಾಯ್ತು. ಪ್ರಪಂಚ ತುಂಬಾನೆ ರಂಗು ರಂಗಾಗಿತ್ತು. ಬುದ್ದಿಯ ಮೇಲೆ ಭಾವನೆಗಳ ಸವಾರಿ.(background music: "ಎಲ್ಲಿತ್ತು ನನ್ನಲ್ಲಿ ಭಾವುಕತೆ, ನೀ ನನಗೆ ಸಿಗುವಾವರೆಗೂ.....") ಅದೊಂದು ತುಂಬ ಸುಂದರ ಲೋಕ. ಪ್ರೀತಿ ನಮ್ಮ "ಜೀವನ-ಪ್ರೀತಿ"ಯನ್ನು ಹೆಚ್ಚಿಸುತ್ತದೆ. ಎಷ್ಟೋ ದುರ್ಗಮ ಹಾದಿ ಕೂಡ ಹೂವಿನ ಹಾದಿಯಾಗಿ ಬಿಡುತ್ತದೆ. ಬದುಕು reality ಇಂದ ತುಂಬ ದೂರ ಹೋಗಿರುತ್ತದೆ.
     ಆದರೆ ಜೀವನ ನಾವು ಅಂದುಕೊಂದಷ್ಟು ಸುಲಭವಲ್ಲ. ನಾವು ಅಂದುಕೊಂಡದ್ದೆಲ್ಲ ನಡಿಯೋದಿಲ್ಲ. ಆಮೇಲೆ ನನ್ನ "Love Story" ಏನಾಯ್ತು ಅಂತಾ ನಿಮಗೆಲ್ಲ ಗೊತ್ತೇ ಇದೆ.
     ಹಾಂ..ಅಂದಹಾಗೆ ನನಗೆ ಯಾವಗಲೂ ಒಂದು ಯೋಚನೆ. ಈ  placementsಗೂ ಮತ್ತೆ girl-friendಗೂ similarity ಏನು ಅಂಥ?? ಎರಡೂ ತುಂಬಾನೇ similar.Both expects lot from us . You should be very impressive 'to get through’. ಹಾಗೆ ಒಂದೆರಡು similarityಗಳನ್ನ ಪಟ್ಟಿ ಮಾಡಿದೇನೇ ನೋಡಿ:
  • Going through company website- ಹುಡುಗಿ background study.
  • Attending presentation- ಮೊದಲ ಮಾತು(in every presentation you feel like as if you got the job, in the same way you feel like "ಹುಡುಗಿ ಸಿಕ್ಕೆ ಬಿಟ್ಟಳು".)
  • Core job- getting a like-minded girl that too of same caste..!!!(very rare event.even if you get, package is very less..!!)
  • Good package(Tier1):more competition- Beautiful girl, more the competition ('work satisfaction' not guaranteed..!!!)
  • Tier2:intelligence+luck- Tier2:very hard to convience, lot of questions+luck
  • tier3(mass recruitment) - ಯಾವ ಹುಡುಗಿನೂ ಸಿಗದೇ, ಅಪ್ಪ-ಅಮ್ಮ ತೋರಿಸಿದವರನ್ನ ಮದುವೆ ಆಗೋದು.
   Blog ತುಂಬ ದೊಡ್ಡದಾಯ್ತು ಅಂತ ಕಾಣಿಸುತ್ತೇ. ಹೇಗಿತ್ತು journey?? bathroom,love,placement-girl friend...ಹೀಗೆ ನಮ್ಮ life ಕೂಡ ವೈವಿಧ್ಯಮಯವಾಗಿರಬೇಕು. ' life is once, make maximum out of it'. ಎಲ್ಲರಿಗೂ ಹೇಳೋದು ಒಂದೇ placements ಆಗಿರಲಿ, ಇಲ್ಲ love ಆಗಿರಲಿ, dont take life seriously. ಏನೇ ತೊಂದರೆ ಬಂದರೂ, ಸೋಲನ್ನು ಒಪ್ಪಿಕೊಳ್ಳದೆ ಧೈರ್ಯವಾಗಿರಿ. ನೀವು ಅಂದುಕೊಂಡಿದ್ದು ಸಿಗದ್ದಿದ್ದರೆ ನಿರಾಸೆಗೊಳ್ಳದೆ ಮುಂದಿನ ಅವಕಾಶಗಳಿಗೆ ಪ್ರಯತ್ನಿಸಿ.....
ಮತ್ತೆ ಸಿಗೋಣ....facebook ho ya,sms...Keep in touch.... :):)   

7 comments: