ಮಳೆ ನಿಂತು ಹೋದ ಮೇಲೆ....

                    ಏಕೋ ಬಹಳ ವರ್ಷಗಳ ನಂತರ ಕಣ್ಣುಗಳಲ್ಲಿ ನೀರು ಬರುತ್ತಿತ್ತು. ಎಲ್ಲರನ್ನೂ ಬಿಟ್ಟು ಬೇರೆ ಕಡೆ ಹೋಗ್ತಾ ಇರೋದು ಒಂದು ನೆಪ ಮಾತ್ರ. ಮನಸ್ಸು ಒಂದು ನೆಪಕ್ಕಾಗಿ ಕಾಯುತ್ತಾ ಇರುತ್ತೆ. ಸಿಕ್ಕರೆ ಸಾಕು, ಹಾಗೆ ಒಂದು ಸಾರಿ ಫ಼್ಲ್ಯಾಶ್ ಬ್ಯಾಕ್ ಗೆ ಹೋಗಿ, ಎಲ್ಲಾ ನಡೆದು ಹೋದ ಘಟನೆಗಳನ್ನ ಒಂದು ಸಾರಿ ಮೀಟ್ ಮಾಡಿ ಇನ್ನೂ ಜೋರಾಗಿ ಅಳೋ ಹಾಗೆ ಮಾಡಿ ಬಿಡುತ್ತೆ. ಲೈಫ್ ಅನ್ನೋದೆ ಹಾಗೆ, ಪಕ್ಕಾ ಪಂಚರಂಗಿ. ಹಳೆಯ ನೆನಪುಗಳು, ಹೊಸ ಆಸೆಗಳು, ಕನಸುಗಳು, ಸಂಬಂಧಗಳು, ಸ್ನೇಹಿತರು..... ಇನ್ನೇನು ಸೋತು ಹೋಗ್ಬೀಟ್ಟೆ ಅನ್ನೋದರಲ್ಲೆ ಒಂದು ಹೊಸ ಆಶಾಕಿರಣ. ಲವ್ ಫೇಲ್ ಆಗಿ ಸಾಕಪ್ಪ ಇದರ ಸಹವಾಸ ಜಂಟಲ್ ಮ್ಯಾನ್ ತರಹ ಇದ್ದು ಬೀಡೋಣ ಅನ್ನೋವಷ್ಟರಲ್ಲಿ ಮತ್ಯಾವದೋ ಹುಡುಗಿ ನೋಡಿ ನಕ್ಕು ಬಿಡ್ತಾಳೆ. ಮುಗಿತು ಕಥೆ.
            ಲೈಫ್ ಎಷ್ಟೊಂದು interesting ಅಲ್ವಾ? ನೀವೇ ಯೋಚನೆ ಮಾಡಿ ಲೈಫ್ ನಲ್ಲಿ ಈ ತರಹ ವೈವಿಧ್ಯತೆ, challenges ಇರಲ್ಲಿಲ್ಲ ಅಂದ್ರೆ ಎಷ್ಟೋಂದು bore ಆಗ್ಬೀಡ್ತಿತ್ತು. ಅಪ್ಪ-ಅಮ್ಮ, ಫ಼್ರೆಂಡ್ಸ್, ಅವ್ರು,ಇವ್ರು...ಅಬ್ಬಾ, ಎಲ್ಲ ಭಾವನೆಗಳ ಆಟ, ಜಗ್ಗಾಟ. ಈ ಅಳು ಅನ್ನೋದು ನಮ್ಮಲ್ಲಿ ಇನ್ನು ಭಾವನೆಗಳು ಜೀವಂತವಾಗಿವೆ ಅಂತಾ ನೆನಪಿಸೋಕೆ ಬರುತ್ತೆ ಅನಿಸುತ್ತೆ.
                  ಈಗ ನನಗೆ ಆಗಿದ್ದು ಅದೆ. ಮೊನ್ನೆ ತಾನೆ engineering join ಆಗಿದ್ದೆ ಅನ್ನೋವಷ್ಟರಲ್ಲಿ ಎಲ್ಲ ಮುಗಿದು ಹೋಯ್ತು. ಫ಼್ರೆಂಡ್ಸ್ ಜೊತೆ ಸುತ್ತಾಡಿದ್ದು,ಹರಟೆ, tour, ಸಿನಿಮಾ, ಶಾಪಿಂಗ್, birthday celebrations ಎಲ್ಲ ಇನ್ನು ಹಸಿರಾಗಿರೋವಾಗಲೆ ಬಿಟ್ಟು ಹೋಗುವ ಸಮಯ ಬಂದಿದೆ. ಈ ಪುಟ್ಟ ಸಮಯ ಎಷ್ಟೋಂದು ನೆನಪುಗಳಿಗೆ, ಅನುಭವಗಳಿಗೆ ಸಾಕ್ಷಿಯಾಯ್ತು. ಕೊನೆಗೆ ಒಂಟಿಯಾದೆನಾ ಅನ್ನೋ ಭಾವನೆ. ಇಷ್ಟೆಲ್ಲ ಆದ ಮೇಲೂ ಏನೋ ಮಿಸ್ ಮಾಡ್ಕೋತೀನಿ ಅನ್ನೋ ಹೆದರಿಕೆ. ಛೇ, ಇನ್ನೂ ಒಂದಿಷ್ಟು ದಿನ ಇದ್ದಿದ್ರೆ ಚೆನ್ನಾಗಿತ್ತು. ಇದನ್ನೆ ನಾನು ಹೇಳಿದ್ದು, ಮಳೆ ನಿಂತು ಹೋದ ಮೇಲೆ, ಹನಿಯೊಂದು ಮೂಡಿದೆ..... ಆದ್ರೆ ಜೀವನ ತುಂಬಾನೆ ಇದೆಯಲ್ಲ. ಮತ್ತೆ ಯುಗಾದಿ ಬಂದೆ ಬರುತ್ತೆ. Lets Keep Moving........