Monday, June 14, 2010

ಇದು ನನ್ನ ಸ್ವಗತ

    'ಸ್ವಗತ'- ಇ೦ಗ್ಲೀಷನ 'ಬ್ಲಾಗಿ೦ಗ್'ಗೆ ಸ೦ವಾದಿಯಾದ ಕನ್ನಡದ ಒ೦ದು ಸು೦ದರ ಪದ. ಇನ್ನು ನಿಖರವಾಗಿ ಹೇಳೋದಾದ್ರೇ 'ಸಾರ್ವಜನಿಕ ಸ್ವಗತ'. ವ್ಹಾವ್...!!! ಎಷ್ಟು ಸು೦ದರವಾದ ಪದ. ನಮಗೆ ಕನ್ನಡ ಹತ್ತಿರವಾಗೋದೆ ಇದೆ ಕಾರಣಕ್ಕೆ. ಕೆಲವು ಪದಗಳ ಅರ್ಥ ಏನಾದ್ರೂ ಇರಲಿ, ಆ ಪದಗಳೇ ಕೇಳಲು ಇ೦ಪಾಗಿರುತ್ತೇ. ಇರಲಿ ಬಿಡಿ ಕನ್ನಡದ ಬಗ್ಗೆ ಹೇಳ್ಬೇಕ೦ದ್ರೆ ಈ ಬ್ಲಾಗ್ ಏನು ಒ೦ದು ದೊಡ್ಡ ಪುಸ್ತಕಾನೆ ಬರದ್ರು ಸಾಕಾಗಲ್ಲ.
     ಅಮೇರಿಕದಲ್ಲಿ 'ಸ್ಟೋರಿ ಕೋರ್'(story corps) ಎ೦ಬ ಜಾಲವಿದೆ. ಏನಪ್ಪಾ ವಿಶೇಷ ಅ೦ದ್ರೆ, ಅಲ್ಲಿ ಯಾರು ಬೇಕಾದ್ರು ಹೋಗಿ ತಮ್ಮ-ತಮ್ಮ ಜೀವನದ ಕಥೆಗಳನ್ನ, ಘಟನೆಗಳನ್ನ(ಸಿಹಿ-ಕಹಿ ಏನೇ ಆಗಿರಬಹುದು) ಹೇಳಬಹುದ೦ತೆ. ಗ೦ಡ ಹೆ೦ಡತಿಗೆ, ಮಗಳು ಅಮ್ಮನಿಗೆ, ಅಮ್ಮ ಮಗನಿಗೆ, ಅಷ್ಟೇ ಯಾಕೆ ನಿಮ್ಮ ನಿಮ್ಮ lovers ಬಗ್ಗೆನೂ ಮಾತಾಡಬಹುದ೦ತೆ. ಅದನ್ಯಾರಪ್ಪಾ ಕೇಳ್ತಾರೆ ಅ೦ತಿರಾ?? ಅದನ್ನ ಕೇಳೋಕೆ ಇಡಿ ದೇಶವೇ ಕಿವಿ ತೆರೆದುಕೊ೦ಡು ಕೂತಿರುತ್ತೇ ಅ೦ದರೆ ನೀವು ನ೦ಬಲೇಬೇಕು!!!! ಯಾಕ೦ದ್ರೆ ಅದನ್ನ ರೇಡಿಯೋಗಳು ಪ್ರಸಾರ ಮಾಡ್ತಾವೆ, ಅಷ್ಟೇ ಯಾಕೆ, ಅದಕ್ಕೆ ವೆಬ್ ಸೈಟ್ ಬೇರೆ ಇದೆ.ಅಮೇರಿಕದ ಪ್ರೆಸಿಡೆ೦ಟರೇ ಬ೦ದು ಅಲ್ಲಿ ಮಾತಾಡ್ತಾರ೦ತೆ!!!! ಬೇಕಿದ್ರೆ ನೀವು ಟ್ರೈ ಮಾಡಿ(www.storycorps.org). ಇನ್ನು ಲ೦ಡನ್ನಿನ ಹೈಡ್ ಪಾರ್ಕ್ ನಲ್ಲಿ ಸ್ಪೀಕರ್ಸ್ ಕಾರ್ನರ್(www.spekerscorner.net) ಅ೦ಥಾ ಒ೦ದು ಪ್ಲೇಸ್ ಇದೆ. ಅಲ್ಲಿ ಯಾರು ಬೇಕಾದ್ರೂ, ಏನ್ ಬೇಕಾದ್ರೂ ಮಾತಾಡಬಹುದ೦ತೆ. ಕೇಳೋಕೆ ಜನ ತು೦ಬಿರುತ್ತಾರ೦ತೆ. ಅದಕ್ಕೆ ಶತಮಾನಗಳ ಇತಿಹಾಸವೇ ಇದೆಯ೦ತೆ!!
            


      ಇಷ್ಟೆಲ್ಲ ನಾನು ಯಾಕೆ ಹೇಳ್ಬೇಕಾಯ್ತ೦ದ್ರೆ, ಸ೦ಸಾರ ಪದ್ದತಿ, ಸಾಮಾಜಿಕ ಪದ್ದತಿಗಳ ಮೂಲಕ ಜಗತ್ತಿನ ಗಮನ ಸೆಳೆದ ಭಾರತದಲ್ಲೇಕೆ ಕೇಳೋರ್ ಸ೦ಖ್ಯೆ ಕಡಿಮೆ ಆಗ್ತಿದೆ ಅ೦ಥಾ??? ನಾನ್ ಯಾರ ಬಗ್ಗೆನೂ ಮಾತಾಡ್ತಿಲ್ಲಾರೀ, ನನ್ನ ಬಗ್ಗೆನೆ ಹೇಳ್ತೀದಿನಿ. ನನಗೆ ಬೇರೆಯವರ ಸ್ಟೋರಿ, ಅವರ ಅನುಭವ, ಮು೦ದೆ ಏನ್ ಮಾಡ್ಬೇಕೂ ಅ೦ತಿದಾರೆ, ಅವರ ಅಪ್ಪ-ಅಮ್ಮರ ಬಗ್ಗೆ ಕೇಳೋದ೦ದ್ರೆ ಬಹಳ ಇಷ್ಟ!!! ಅದರಲ್ಲೆನೂ ಸಮಸ್ಯೆ ಇಲ್ಲ ತು೦ಬಾ ಚೆನ್ನಾಗಿಯೇ ಹೇಳ್ತಾರೆ(ಹುಡುಗಿಯರ ಹತ್ತಿರ ಇದನ್ನ ಕೇಳೋವಾಗ ಸ್ವಲ್ಪ ಹುಷಾರಾಗಿರಿ, ಅಪಾರ್ಥ ಮಾಡ್ಕೋ೦ಡ್ರೆ ಕಷ್ಟ!).ಆದರೆ ಸಮಸ್ಯೆ ಏನು ಅ೦ದ್ರೆ ನನ್ನ ಸ್ಟೋರಿ ಕೇಳೋಕೆ ಯಾರು ರೆಡಿ ಇರಲ್ಲಾ!!! ಇದು ನನ್ನದೊಬ್ಬನದೆ ಸಮಸ್ಯೆ ಅಲ್ಲ.., ಯಾರ ಸ್ಟೋರಿ ಕೇಳೋಕೆ ಯಾರು ರೆಡಿ ಇಲ್ಲಾ!!! ಇದೆ ಕಾರಣಕ್ಕೆ ನಾನು ಡಿಸೈಡ್ ಮಾಡ್ಬಿಟ್ಟಿದೀನೀ..... ಇನ್ಮು೦ದೆ ನನ್ನ ಮನಸ್ಸಿಗೆ ಬ೦ದದ್ದನ್ನ ನನ್ನ ಬ್ಲಾಗ್ ಲ್ಲಿ ಗೀಚಿಬಿಡೋದು, ಅ೦ಥಾ!!! ನನ್ನ ಮನಸ್ಸಿಗೂ ಸಮಾಧಾನ, ಬೇರೆ ಯಾರಿಗಾದ್ರೂ ನನ್ನ ಬಗ್ಗೆ ಕುತೂಹಲ ಇದ್ರೆ ನೋಡಿಕೊಳ್ಳಲಿ. ಎಲ್ಲಾ ಖುಲ್ಲ೦ ಖುಲ್ಲಾ!!!!  ಹೀಗಿದೆ ನೋಡಿ ನನ್ನ ಬ್ಲಾಗಿನ ಹಿ೦ದಿನ ಪ್ರೇರಣೆ...... ಇದನ್ನೆ ನಾನು ಹೇಳಿದ್ದು " ನೋಡಿ ಸ್ವಾಮಿ ನಾನಿರೋದೆ ಹೀಗೆ" ಅ೦ಥಾ!!!!  Anyway, you all are WELCOME to my WORLD.......

No comments:

Post a Comment